ನನಗೆ ಸದ್ಗುರು ಶ್ರೀ ಅನಿರುದ್ಧ ಬಾಪೂರವರ ಚರಣಗಳ ಬಳಿ ಸಾರಿ 2-3 ವರ್ಷಗಳೇ ಸಂದವು. ನನ್ನ ಪತ್ನಿ ಮೃಣ್ಮಯಿ (ಪೂರ್ವಾಶ್ರಮದ ಹೆಸರು ರೇಶ್ಮಾ ಕಾಂದಳಕರ್)ಯ ತವರಿನಲ್ಲಿ ಎಲ್ಲರೂ ಬಾಪೂಮಯರಾಗಿರುವರು. ಆದುದರಿಂದ ಮದುವೆಯ ನಂತರ ಅವರಗಳ ಬಾಯಿಯಿಂದ ಬಾಪೂರವರ ಮಹಿಮೆಯನ್ನು ಕೇಳಿ ನನ್ನ ಮನಸ್ಸು ನನಗರಿವಿಲ್ಲದೆಯೇ ತಾನೇ ತಾನಾಗಿ ಬಾಪೂರವರ ಕಡೆಗೆ ಆಕರ್ಷಿತವಾಗತೊಡಗಿತು ಹಾಗೂ ಮೆಲ್ಲಮೆಲ್ಲನೇ ನೋಡ ನೋಡುತ್ತಲೇ ಬಾಪೂ ನಮ್ಮ ಜೀವನದ ಸುಖ-ದುಃಖ ಒಂದಂಗವೇ ಆಗಿ ಬಿಟ್ಟರು. ನಾವೂ ಕೂಡಾ ಬಾಪೂಮಯರಾದೆವು. ನಮಗೆ ಬಾಪೂರವರ ಕೃಪೆಯ ಹಲವಾರು ಅನುಭವಗಳಾಗಿವೆ.
- ಅಭಿಜಿತ್ ಮಯೇಕರ್, ಕಾಂದಿವಲಿ