ನಾನು ಎಪ್ರಿಲ್ 1983ರಿಂದ ಲುಫ್ತಾನ್ಸಾ ಏರ್‌ಲಾಯಿನ್ಸ್‌ನ ಮುಂಬಯಿ ಆಫೀಸ್‌ನಲ್ಲಿ ಫೈನಾನ್ಸ್ ಆ್ಯಂಡ್ ಅಡ್‌ಮಿನಿಸ್ಟ್ರೇಶನ್ ಡಿಪಾರ್ಟಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದೆನು. 19 ಅಕ್ಟೋಬರ್ 2002ರಂದು ನನಗೆ ಭಯಂಕರ ವಾರ್ತೆಯೊಂದು ತಿಳಿಯಿತು. ನಮ್ಮ ಆಫಿಸಿನ ಫೈನಾನ್ಸ್ ಆ್ಯಂಡ್ ಆಡ್‌ಮಿನಿಸ್ಟ್ರೇಶನ್ ಡಿಪಾರ್ಟ್‌ಮೆಂಟ್ ಹಾಗೂ ಚೆನ್ನೈ ಶಾಖೆ ಮುಚ್ಚುವುದರಲ್ಲಿದ್ದು, ಈ ಶಾಖೆಗಳು ಮುಂದಕ್ಕೆ ನವ ದೆಹಲಿಯಲ್ಲಿ ಕಾರ್ಯಾರತವಾಗುವವು, ಒಂದೋ ವಿ.ಆರ್.ಎಸ್. ಪಡೆದುಕೊಳ್ಳಿರಿ ಅಥವಾ ನವ ದೆಹಲಿಗೆ ಟ್ರಾನ್ಸ್‌ಫರ್ ಮಾಡಿಸಿಕೊಳ್ಳಿರಿ ಎಂಬ ಎರಡು ಪರ್ಯಾಯಗಳನ್ನು ಕಂಪೆನಿ ನಮ್ಮ ಮುಂದಿರಿಸಿತು.
- ಶೈಲೇಶ್ ಗೋಪಾಲಕೃಷ್ಣ ಉಳ್ಳಾಲ್, ವಿಲೇಪಾರ್ಲೆ