ಫೆಬ್ರವರಿ 4, 2004ರಂದು ನಾನು ಪಣಜಿಯಲ್ಲಿರುವ ನನ್ನ ಮಗಳನ್ನು ಭೇಟಿಯಾಗಲೆಂದು ಬಸ್‌ನಿಂದ ಪ್ರವಾಸ ಮಾಡುತ್ತಿದ್ದೆನು. ನನ್ನ ಅಳಿಯ ಬಸ್‌ಸ್ಟ್ಯಾಂಡ್‌ನಲ್ಲಿ ನನಗಾಗಿ ಕಾದು ನಿಂತಿದ್ದನು. ನಾನು ಪಣಜಿ ಬಸ್ ಸ್ಟ್ಯಾಂಡ್‌ನಲ್ಲಿಳಿದು ನನ್ನ ಅಳಿಯ ನಿಂತಿರುವಲ್ಲಿಗೆ ನಡೆಯತೊಡಗಿದೆನು. ಒಮ್ಮೆಲೇ ನನಗೆ ಕಣ್ಣು ಕತ್ತಲಿಟ್ಟಂತಾಯಿತು. ನಾನು ನನ್ನ ಅಳಿಯನನ್ನು ಕರೆದೆನು.
- ರಾಮಚಂದ್ರ ಪಡುಕೋಣೆ, ಮಿಶಿಗನ್, ಅಮೆರಿಕ