ನಾನು ಸಾಯನ್ ಪೆರಪ್ಲಾಜಿಕ್ ಫೌಂಡೇಶನ್ನಲ್ಲಿ ಕೆಲಸಕ್ಕಿದ್ದೇನೆ. ನಾನು ಹಾಗೂ ನನ್ನ ಪತಿ ಇಬ್ಬರೂ ಅಂಗವಿಕಲರಾಗಿದ್ದೇವೆ. ಮುಂಚೆ ನಾವು ರೈಲ್ವೆಯ ಸ್ಥಳದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದೇವು. ಒಮ್ಮೆ ನನ್ನ ತಂದೆಗೆ ಹುಶಾರಿಲ್ಲದ ಕಾರಣ ನಾವು ಅವರನ್ನು ನೋಡಲು ಅವರಲ್ಲಿಗೆ ಹೋಗಿದ್ದೆವು. ಹಿಂತಿರುಗಿ ಬಂದು ನೋಡಿದಾಗ ನಮ್ಮೆಲ್ಲಾ ಗುಡಿಸಲುಗಳನ್ನು ನೆಲಸಮ ಮಾಡಿದ್ದರು. ನನ್ನ ಹತ್ತಿರ ರೇಶನ್ ಕಾರ್ಡ್ ಹಾಗೂ ಮತದಾನದ ಚೀಟಿ ಇತ್ತು. ಆದರೆ, ಗುಡಿಸಲಿನ ಫೋಟೋಪಾಸ್ ಹಾಗೂ ಲೈಸೆನ್ಸ್ ಮಾತ್ರ ಕಳೆದು ಹೋಗಿತ್ತು.
- ಸೌ. ಪುಷ್ಪಾ ಪವಾರ್, ಮಾನಖುರ್ದ್