ಬುಧವಾರ ನವೆಂಬರ್ 10 ರಂದು ಧನಲಕ್ಪ್ಮಿ ಪೂಜೆಯ ಉತ್ಸವನದಲ್ಲಿ ನಾನು ತುಂಬಾ ಆನಂದಿಂದ ಸಹಭಾಗಿಯಾಗಿದ್ದೆನು. ಅದಕ್ಕೆ ಮುಂಚೆ ದೀಪಾವಳಿಯ ರಜೆಯಲ್ಲಿ ಮಾರ್ಕೆಟಿಂಗ್ ತಿರುಗಾಟ ಎಂದು ಹೆಚ್ಚಿನ ಪ್ರಮಾಣದಲ್ಲಿ ಹೊರಗಿನ ತಿನಿಸುಗಳ ತಿನ್ನುವಿಕೆಯಾಗಿದ್ದಿತು. ಆದಿನ ಸ್ವಲ್ಪ ಸ್ಪಲ್ಪ ಹೊಟ್ಟೆ ನೋವಾಗುತ್ತಿತ್ತು. ಹೊರಗೆಡೆ ತಿಂದುದರಿಂದ ಹೀಗಾಗಿರಬೇಕೆಂದು ತಿಳಿದು ಅದನ್ನು ಅಲಕ್ಪಿಸಿದೆನು. ಮಾರನೆಯ ದಿನ ಮನೆಯಲ್ಲಿ ದೀಪಾವಳಿ ಲಕ್ಪ್ಮೀ ಪೂಜೆಯನ್ನು ಸಡಗರದಿಂದ ಆಚರಿಸಿದೆವು. ಹೋಳಿಗೆಯ ನೈವೇದ್ಯಯನ್ನು ನಂದಾ ಮಾತೆಗೆ ಅರ್ಪಿಸಿದೆನು. ಆಗ ಹೊಟ್ಟೆ ನೋವು ಸ್ವಲ್ಪ ಸಹಿಸಲಸಾಧ್ಯವಾದಂತೆನಿಸಿದುದರಿಂದ ಮಾತ್ರೆ ತೆಗೆದು ಕೊಂಡು ಮಲಗಿದೆನು.
- ಡಾ. ರಾಜಶ್ರೀ ವೀರಾ ಶಾಹಾ, ವಡಾಲ