ಅಂದು ರಭಸದಿಂದ ಬೀಳುವ ಮಳೆಯನ್ನು ನೋಡಿ ನನಗೂ ಚಿಂತೆಯಾಯಿತು. ಆ ದಿನ ನನ್ನ ಮೊಬೈಲ್ ಕೂಡಾ ಸರಿಯಾಗಿ ನಡೆಯುತ್ತಿರಲಿಲ್ಲ. ನನ್ನ ಹೆಂಡತಿ ಅವಳಿಗೆ ಮನೆಯ ಫೋನಿನಿಂದ ಫೋನ್ ಮಾಡಿ ‘‘ರಿಕ್ಪಾದಲ್ಲಿ ಕುಳಿತು ಐರೋಲಿಗೆ ಬಂದು ಬಿಡು’’ ಎಂದು ಹೇಳಿದಳು. ಹಾಗೂ ನನಗೂ ಫೋನ್ ಮಾಡಿ ‘‘ಭವ್ಯ ಐರೋಲಿಗೆ ಬಂದು ನಿಂತಿರುತ್ತಾಳೆ ನೀವು ಅಲ್ಲಿಗೆ ಹೋಗಿ ಅವಳನ್ನು ಕರೆದುಕೊಂಡು ಬನ್ನಿರಿ’’ ಎಂದು ಸೂಚಿಸಿದಳು.
- ಶ್ರೀಕಾಂತ ಅಗರವಾಲ್, ಪವಯಿ