ನನ್ನ 12 ವರ್ಷದ ಮಗ ನಿತ್ಯದಂತೆ ಶಾಲೆಗೆ ಹೋಗಿದ್ದನು. ಆದರೆ, ಆ ದಿನ ಅವನು ಶಾಲೆಯಿಂದ ಮನೆಗೆ ಬರಲೇ ಇಲ್ಲ. ನನಗೆ ಆಶ್ಚರ್ಯವೂ ಆಯಿತು. ದುಃಖವೂ ಆಯಿತು. ಮನಸ್ಸಿನಲ್ಲಿ ಕೆಟ್ಟ ವಿಚಾರ ಬರಲಾರಂಭಿಸಿದವು ಹಾಗೂ ನಮ್ಮ ಇಡೀ ಪರಿವಾರ ಚಿಂತೆಯಲ್ಲಿ ಮುಳುಗಿತು. ನಾವು ಎಲ್ಲಾ ಕಡೆಯಲ್ಲಿ ಹುಡುಕಿದರೂ ಎಲ್ಲಿ ಸಿಗಲಿಲ್ಲ. ನಮ್ಮ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದ್ದವು.
- ದೇವೇಂದ್ರ ಉಪಾಧ್ಯಾಯ