31ಡಿಸೆಂಬರ್ 2007ರ ವರ್ಷದ ಪೂರ್ವ ಸಂಧ್ಯೆಯ ಸಮಾರಂಭದಲ್ಲಿ ನಾವು ಕೆಲ ಮಿತ್ರರು ಸೇರಿ ಒಂದು ಪಾರ್ಟಿಯನ್ನು ಆಯೋಜಿಸಿದ್ದೆವು. ಪಾರ್ಟಿ ಹಾಲ್ ಖಾರ್ನ ಹ್ಯಾಪೀ ಹೋಮ್ (ಶ್ರೀ ಅನಿರುದ್ಧ ಗುರು ಕ್ಪೇತ್ರಂ)ನ ಹತ್ತಿರದಲ್ಲಿಯೇ ಇದ್ದಿತು. ಹ್ಯಾಪೀ ಹೋಮ್ ಅಂದರೆ, ನಮ್ಮ ಪರಮ ಪೂಜ್ಯ ಬಾಪೂರವರ ನಿವಾಸ ಸ್ಥಳ. ನಮಗೆ ಬಾಪೂ ಭಕ್ತರಿಗೆ ಶ್ರೀ ಅನಿರುದ್ಧ ಗುರುಕ್ಪೇತ್ರಂ ಎಂದರೆ ಈ ಸಂಸಾರದ ಸರ್ವೋಚ್ಚ ತೀರ್ಥ ಸ್ಥಳವೇ ಸರಿ. ಇಲ್ಲಿ ಬಾಪೂರವರು ಪರಮೇಶ್ವರ ದತ್ತಗುರುವಿನ ಪ್ರತಿಮೆ ಹಾಗೂ ಶ್ರೀಮದ್ಪುರುಷಾರ್ಥ ಪುರುಷೋತ್ತಮ ಯಂತ್ರದ ಸ್ಥಾಪನೆಯನ್ನು ಮಾಡಿದ್ದಾರೆ. ಆದುದರಿಂದ ನಾನು ನನ್ನ ಮಿತ್ರರಿಗೆ ‘‘ನಾವು ಹ್ಯಾಪೀ ಹೋಮ್ಗೆ ಹೋಗಿ ಗುರು ಕ್ಪೇತ್ರಂಗೆ ಹೋಗಿ ದರ್ಶನ ಪಡೆದು ಹೊಸ ವರ್ಷದ ಶುಭಕಾಮನೆಗಳನ್ನು, ಆಶೀರ್ವಾದ ರೂಪದಲ್ಲಿ ಪಡೆದುಕೊಳ್ಳುವಾ’’ ಎಂದು ಹೇಳಿದನು.
- ಉಮಂಗ್ ರಾಜೇಶ್ ಸರಯ್ಯ, ಮುಂಬಯಿ