ಕೊಲ್ಹಾಪುರದದಲ್ಲಿ ಮಹಾರಾಷ್ಟ್ರ ಸರಕಾರ ಮತ್ತು ಎಂಟಿಡಿಸಿಯ ಜಂಟಿ ಆಯೋಜನೆಯಲ್ಲಿ ರೂಪಿಸಲಾದ ‘ರಂಕಾಲಾ’ ಮಹೋತ್ಸವದಲ್ಲಿ ನನಗೆ 7ಫೆಬ್ರವರಿ 2007ರಂದು ಒಂದು ಸ್ಟೇಜ್ ಶೋ ಮಾಡಬೇಕಾಗಿತ್ತು. ಫೆಬ್ರವರಿ 14ರಂದು ಬೆಳಿಗ್ಗೆ ಸುಮಾರು 10 ಘಂಟೆಗೆ ನಾನು, ನನ್ನ ಸ್ನೇಹಿತೆ ಮತ್ತು ಚಾಲಕನೊಟ್ಟಿಗೆ ನನ್ನ ಇನೋವಾ ಕಾರಿನಲ್ಲಿ ಕೋಲ್ಹಾಪುರಕ್ಕೆ ಹೋಗಲು ಹೊರಟೆವು. ಮಧ್ಯಾಹ್ನ ಸುಮಾರು 12.30ಕ್ಕೆ ನಾವು ಪುಣೆಯಲ್ಲಿ ಇಳಿದು ಚಹಾ-ಉಪಹಾರ ಮಾಡಿಕೊಂಡೆವು. ನಂತರ ಮುಂದಿನ ಪ್ರಯಾಣಕ್ಕೆ ತೊಡಗಿದಾಗ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ನನಗೆ ಹಾಗೂ ನನ್ನ ಸ್ನೇಹಿತೆಗೆ ಒಳ್ಳೆ ನಿದ್ದೆ ಹತ್ತಿತ್ತು. ಮಾಮೂಲಾಗಿ ನಾನು ಯಾವಾಗಲೂ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿರುತ್ತೇನೆ. ಆದರೆ, ಇನೋವಾದ ಹಿಂದಿನ ಸೀಟಿನಲ್ಲಿ ಆರಾಮವಾಗಿ ಮಲಗಲು ಅನುಕೂಲವಾಗಿರುವುದರಿಂದ ನಾವಿಬ್ಬರೂ ಗೆಳತಿಯರು ಹಿಂದಿನ ಸೀಟಿನಲ್ಲಿಯೇ ಕುಳಿತಿದ್ದೆವು. ನಾನು ಎಚ್ಚರಗೊಂಡಾಗ ನಮ್ಮ ಕಾರು ಪುಣೆ-ಸಾತಾರ ಎಕ್ಸ್‌ಪ್ರೆಸ್-ವೇ ಯಲ್ಲಿ 120 ಪ್ರತಿ ಘಂಟೆಯ ವೇಗದಲ್ಲಿ ಓಡುತ್ತಿದ್ದಿತ್ತು. ಆಗ ಆಕಸ್ಮಾತ್ ಹಠಾತ್ತನೇ.....ನಾನು ನೋಡುವುದೆನನ್ನು? ನಮ್ಮ ಚಾಲಕ ತೂಕಡಿಸುತ್ತಿದ್ದನು ಹಾಗೂ ಎದುರಿನಿಂದ ತೀವ್ರಗತಿಯಿಂದ ಬರುತ್ತಿರುವ ಎಸ್.ಟಿ. ಬಸ್ಸು ನಮ್ಮತ್ತ ಮುನ್ನುಗ್ಗುತ್ತಿತ್ತು. ನಾನು ಕೂಡಲೇ ನಮ್ಮ ಚಾಲಕನನ್ನು ಸಾವಧಾನಗೊಳಿಸಿದೆನು ಹಾಗೂ ಅವನು ತತ್‌ಕ್ಪಣವೇ ಬ್ರೇಕ್ ಹಾಕಿದನು. ನಮ್ಮ ಕಾರು ಸ್ವಲ್ಪ ಎಡಗಡೆಗೆ ತಿರುಗಿದರಿಂದ ಮುಖಾಮುಖಿಯಾಗಿ ಎಸ್.ಟಿ.ಬಸ್‌ಗೆ ಅಪ್ಪಳಿಸಬೇಕಾಗಿದ್ದ ನಮ್ಮ ಕಾರು ಬಸ್ಸಿನ ಹಿಂಬದಿಗೆ ಅಪ್ಪಳಿಸಿತ್ತು. ಅಪ್ಪಳಿಕೆ ಎಷ್ಟೊಂದು ಬಲವಾಗಿತ್ತೆಂದರೆ ಕಾರಿನ ಅವಯಯಗಳೆಲ್ಲಾ ಸಡಿಲಗೊಂಡಿದ್ದವು. ಇಂಜಿನ್ ಅಂತೂ ಪೂರ್ಣ ನಿಕಾಮಿಯಾಗಿದ್ದಿತ್ತು ಹಾಗೂ ಮುಂದಿನ ಚಕ್ರಗಳೆರಡೂ ಮುರಿದಿದ್ದವು. ಕಾರಿನ ಮುಂದಿನ ಗಾಜು ನುಚ್ಚುನೂರಾಗಿದ್ದು, ಇಂಜಿನ್‌ನಿಂದ ಬಾಷ್ಪ ಹಾಗೂ ಹೊಗೆ ಬರುತ್ತಿದ್ದಿತ್ತು. ಬಸ್ಸಿನ ಎಡಗಡೆಯ ಪರಿಸ್ಥಿತಿಯೂ ಕೂಡಾ ತುಂಬಾ ಗಂಭೀರವಾಗಿ ನಜ್ಜು-ಗುಜ್ಜಾಗಿದ್ದಿತ್ತು. ಆದರೆ, ಆಶ್ಚರ್ಯದ ಸಂಗತಿಯೆಂದರೆ ನಾವು ಮೂವರಿಗೆ ಮತ್ತು ಬಸ್ಸು ಪ್ರಯಾಣಿಕರಿಗೆ ಯಾರಿಗೂ ಒಂದಿಷ್ಟು ಗಾಯಗಳಾಗಿರಲಿಲ್ಲ. ಮಾಮೂಲು ಗೀರುಗಾಯಗಳೂ ಇಲ್ಲ.ಕಣ್ರೆಪ್ಪೆ ಮುಚ್ಚಿ ತೆರೆಯುವುದರಲ್ಲಿ ನಡೆದ ಈ ಘಟನೆ ನೆನಸಿಕೊಂಡು ನಾವು ಭಯಭೀತರಾಗಿ ಸ್ವಲ್ಪ ಹೊತ್ತು ಹಾಗೆಯೇ ಕುಳಿತ್ತಿದ್ದೆವು. ಅಷ್ಟರಲ್ಲಿ ಅಲ್ಲಿ ಬಂದು ಸೇರಿದ ಊರವರು ಕಾರು ಹೊಗೆಯುಗುಳುತ್ತಿರುವುದನ್ನು ಕಂಡು ನಮ್ಮನ್ನು ಕಾರಿನಿಂದ ಕೆಳಗಿಳಿಯುವಂತೆ ಹೇಳಿದರು. ನಾವು ಮೂವರೂ ಥರ-ಥರ ನಡುಗುತ್ತಿದ್ದೆವು. ಬಾಯಿಯಿಂದ ಶಬ್ದವೇ ಹೊರಡುತ್ತಿರಲಿಲ್ಲ. ನಮ್ಮನ್ನು ಪೂರ್ಣ ಸುಖರೂಪದಿಂದ ನೋಡಿದ ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದರು. ಅವರು ಕಣ್ಣುಗಳಿಂದಲೇ ‘‘ನೀವು ಬಚಾವಾದದ್ದಾದರೂ ಹೇಗೆ?’’ ಎಂದು ನಮ್ಮ ಯೋಗಕ್ಪೆಮವನ್ನು ವಿಚಾರಿಸಿಕೊಳ್ಳುತ್ತಿದ್ದರು.
- ಫಾಲ್ಗುಣೀ ಪಾಠಕ್ (ಖ್ಯಾತ ಗಾಯಕಿ)